12/01/2025
ಜೈ ಶ್ರೀ ರಾಮ್ 🚩
Contact information, map and directions, contact form, opening hours, services, ratings, photos, videos and announcements from Pannaga International Academy, Bangalore.
12/01/2025
ಜೈ ಶ್ರೀ ರಾಮ್ 🚩
12/01/2025
" ಶಮೀ ಶಮೀ ಯಥೇ ಪಾಪಂ..
ಶಮಿ ಶತೃ ವಿನಾಶಮ್..
ಅರ್ಜುನಸ್ಯ ಧನುರ್ಧಾರಿ..
ರಾಮಸ್ಯ ಪ್ರೀಯದರ್ಶನಂ.."
ಬನ್ನಿಯನ್ನು ಪರಸ್ಪರ ಕೊಟ್ಟು ತೆಗೆದುಕೊಂಡು, ಸುಖ, ಶಾಂತಿ, ಸ್ನೇಹತ್ವದೊಂದಿಗೆ ನೆಮ್ಮದಿಯೊಂದಿಗೆ ಬದುಕೋಣ..
ತಮಗೆ ಹಾಗೂ ತಮ್ಮ ಕುಟುಂಬದ ಸರ್ವ ಸದಸ್ಯರಿಗೆ " ನಾಡಹಬ್ಬ ದಸರೆಯ ಹಾರ್ಧಿಕ ಶುಭಾಶಯಗಳು.... 🙏🙏
ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ
*ಶ್ರೀ ದುರ್ಗಾ ಶಕ್ತಿ ಸಪ್ತಶತಿ ಋಷಿ ಪ್ರಜ್ಞಾ*
*ಆಂದೋಲನ -ಕರ್ನಾಟಕ*
*🪷ಹತ್ತನೇ ದಿನ ವಿಜಯದಶಮಿ 🪷*
*ವಿಜಯದಶಮಿ ಅಥವಾ ದಸರಾ* ಎಂಬ ಪದಗಳು ಒಂದಕ್ಕೊಂದು ಸಂವಾದಿಯಾಗಿವೆ. ದಕ್ಷಿಣ ಭಾರತದಲ್ಲಿ ಹೇಳುವ ದಸರಾ, ಉತ್ತರ ಭಾರತದಲ್ಲಿ ಕರೆಯಲಾಗುವ *ದಶ ಅಹರ್, ದಶೇರಾ, ದಸಹರ* ಇತ್ಯಾದಿ ಪದಗಳನ್ನು ಹೀಗೆ ತಿಳಿಯಬಹುದು. *ದಶ+ಹರ* ಎಂಬ ಪದಗಳ ಉತ್ಪತ್ತಿಯೇ ದಸರಾ, ದಸಹರ ಇತ್ಯಾದಿ. ದಸರಾ ಎಂದರೆ ಹೆಸರೇ ಸೂಚಿಸಿದಂತೆ *10 ದಿನ*. ದಶ-ಹರ ಎಂದರೆ *ಹತ್ತನೇ ದಿನಕ್ಕೆ ಸಮಸ್ತ ಸಂಕಟಗಳ ಹರಣವಾಯಿತು* ಎಂಬ ಅರ್ಥವಿದೆ. ರಾಕ್ಷಸರ ಮೇಲೆ, ದುಷ್ಟ ಶಕ್ತಿಯ ಮೇಲೆ ದೇವತೆಗಳು ವಿಜಯ ಸಾಧಿಸಿದ ದಿನವನ್ನು ವಿಜಯ ದಶಮಿ ಅಥವಾ ದಸರಾ ಎನ್ನಲಾಗುತ್ತದೆ.
ದುರ್ಗೆಯು ವಿವಿಧ ರೂಪಗಳ ಮೂಲಕ ಮಹಿಷಾಸುರನನ್ನು, ಶುಂಭ- ನಿಶುಂಭರನ್ನು ಸಂಹಾರ ಮಾಡಿದ ದಿನವೂ ಇದೇ ದಶಮಿಯಾಗಿದೆ. ಶ್ರೀರಾಮನು ಸೀತೆಗಾಗಿ ಸೆಣಸಿ ರಾವಣನನ್ನು ಕೊಂದ ದಿನವೂ ವಿಜಯದಶಮಿಯೇ ಆಗಿದೆ. ಪಾಂಡವರು ತಮ್ಮ ವನವಾಸವನ್ನು ಪೂರೈಸಿ ಕೌರವರಿಗೆ ಎದರಾದ ದಿನವೂ ಇದೇ ವಿಜಯದಶಮಿ ಹೀಗಾಗಿ ಈ ದಿನಕ್ಕೆ ವಿಶಿಷ್ಟವಾದ ಪ್ರಾಶಸ್ತ್ಯವಿದೆ.
*ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ |*
*ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||*
ಶಾಕ್ತ ಪರಂಪರೆಯವರು ವಿಜಯದಶಮಿಯಂದು *ಅಪರಾಜಿತಾ ದೇವಿ* ಯನ್ನು ವಿಶೇಷವಾಗಿ ಆರಾಧಿಸುತ್ತಾರೆ. ಜಗತ್ತಿನ ಎಲ್ಲ ರೂಪಗಳು ದೇವಿಯ ರೂಪವೇ ಎಂದು ಭಾವಿಸಿ ಪೂಜೆ ಮಾಡುತ್ತಾರೆ. ಉತ್ತರ ಭಾರತದಲ್ಲಿ ಶ್ರೀರಾಮ, ದುರ್ಗೆಯ ಪೂಜೆ ಆರಾಧನೆ ನಡೆಯುತ್ತದೆ. ಸಂಜೆ ಮರ, ಹತ್ತಿ, ತರಿಗೆಲೆ ಕಸ, ಬೇಡದ ಮರಮುಟ್ಟಿನ ಪದಾರ್ಥಗಳಿಂದ ಕೂಡಿದ ದಶಕಂಠನ ಪ್ರತಿಮೆಯನ್ನು ನಿರ್ಮಿಸಿ ಸಿಂಗರಿಸಿ ಬೆಂಕಿಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ನೆರಹೊರೆಯವರಿಗೆ ಸಿಹಿಹಂಚಲಾಗುತ್ತದೆ.
ದೇವಿಯನ್ನು ಮೃತಿಕೆಯಿಂದ(ಮಣ್ಣಿನ ವಿಗ್ರಹ) ದೇವಿಯನ್ನು ಪ್ರತಿಷ್ಠಾಪಿಸಿ ಆರಾಧಿಸಿದವರು ನವರಾತ್ರಿಯವರೆಗೂ ಪೂಜೆ ಮಾಡಿ ದಶಮಿಯಂದು ವಿಶೇಷ ಆರಾಧನೆಯನ್ನು ನೆರವೇರಿಸಿ, ಯೋಗ್ಯರಿಗೆ ಫಲದಕ್ಷಿಣೆ, ವಸ್ತ್ರ, ಸಿಹಿತಿಂಡಿಗಳನ್ನು ನೀಡಿ ಗೌರವಿಸುವರು. ದೇವಿಯ ಮೃಣ್ಮಯ ವಿಗ್ರಹವನ್ನು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನದಿಯಲ್ಲಿ ವಿಸರ್ಜನೆ ಮಾಡುವುದುಂಟು. ಕಲಶ ರೂಪದಲ್ಲಿ ದುರ್ಗೆಯನ್ನು ಆರಾಧಿಸುವವರು ಕಲಶವನ್ನು ಅಲುಗಿಸಿ ತೀರ್ಥವನ್ನು ಹಿರಿಯರಾಧಿಯಾಗಿ ಕುಟುಂಬಸ್ಥರಿಗೆ ದೇವಿಯ ಕೃಪೆಯಾಗಲೆಂದು ಪ್ರೋಕ್ಷಣೆ ಮಾಡುವರು. ದೀಪ ರೂಪದಲ್ಲಿ ದೇವಿ ಆರಾಧನೆ ಮಾಡಿದವರು ದಶಮಿಯದಿನದಂದು ವಿಶೇಷ ಪೂಜೆ ಸಲ್ಲಿಸಿ ದೀಪಾರಾಧನೆಯನ್ನು ಪೂರ್ಣಗೊಳಿಸುವರು. ಚಕ್ರ ರೂಪದಲ್ಲಿ ಆರಾಧನೆ ಮಾಡಿದವರು ಚಕ್ರದಲ್ಲಿ ಬೀಜಾಕ್ಷರಗಳನ್ನು ಆಯಾದೇವತೆಗಳಿಗೆ ಆರೋಪಿಸಿ ಆಯಾಮಂಡಲಗಳ ಪೂಜೆ ಮಾಡಿ ಚಕ್ರಕ್ಕೆ ಅಭಿಷೇಕ, ನ್ಯಾಸಗಳ ಮೂಲಕ ಪೂಜಾ ವಿಧಿಯನ್ನು ನೆರವೇರಿಸುವರು. ಅನುಷ್ಠಾನಕ್ಕೆ ಸಮಯಕೊಡಲಾಗದವರು ದೇವಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ ಪೂಜೆ ಮಾಡಿಸುವುದುಂಟು.
*ಶಮೀಪೂಜೆಯ ವೈಶಿಷ್ಟ್ಯ*
ಆಯುಧಪೂಜೆಯ ಮಾರನೇದಿನವಾದ ದಶಮಿಯಂದು ಆಯುಧಗಳ ಸಮೇತ ಗ್ರಾಮದೇವತೆ, ನಾಡದೇವತೆ ಉತ್ಸವ ಮೂರ್ತಿಗಳೊಂದಿಗೆ ಸೀಮೋಲ್ಲಂಘನ(ಗ್ರಾಮವನ್ನು ದಾಟಿ) ಮಾಡಿ ಊರಿನ ಹೊರಗೆ ಶಮಿಪೂಜೆಯನ್ನು ಮಾಡಿ ಶಮಿ(ಬನ್ನಿ)ವೃಕ್ಷವನ್ನು ಕಡಿದು ಬನ್ನಿ ಪತ್ರೆಯನ್ನು
*ಶಮಿಶಮಯತೇ ಪಾಪಂ ಶಮೀ ಶತ್ರು ವಿನಾಶನಂ*
*ಅರ್ಜುನಸ್ಯ ದರ್ನುರ್ಧಾರಿ ರಾಮಸ್ಯ ಪ್ರಿಯದರ್ಶಿನಿ |*
*ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ*
*ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ॥*
ಎಂಬ ಸ್ತೋತ್ರವನ್ನು ಪಠಿಸುತ್ತಾ ತಮ್ಮ ಬಳಿ ಇಟ್ಟುಕೊಳ್ಳುವರು.
*ವಿವಿಧ ಭಾಗಗಳಲ್ಲಿ ವಿವಿಧ ಆಚರಣೆ*
ಕರ್ನಾಟಕದ ದಸರಾದಲ್ಲಿ ನಾಡದೇವಿ ಚಾಮುಂಡೇಶ್ವರಿಯನ್ನು ಗಜವಾಹನದ ಮೇಲೆ ಸ್ಥಾಪಿಸಿ ಮೆರವಣಿಗೆ ಮಾಡಿದರೆ, ಮಡಿಕೇರಿಯಲ್ಲಿ ಮಾರಿಕಾಂಬೆಯ ಕರಗ ಉತ್ಸವ ನೆರವೇರಿಸಲಾಗುತ್ತದೆ.
ಹಿಮಾಚಲ ಪ್ರದೇಶದಲ್ಲಿ ಕುಲು ದಸರಾ ರಾಮನಿಂದ ಕೆಟ್ಟತನ ನಾಶಕ್ಕೆ ನಡೆಯುವ ದೊಡ್ಡ ಜಾತ್ರೆಯಾದರೆ, ಮಹಾರಾಷ್ಟ್ರದಲ್ಲಿ ವಿಜಯದಶಮಿಯಂದು ಸರಸ್ವತಿ ಪೂಜೆ ನಡೆಸಲಾಗುತ್ತದೆ.
ಉತ್ತರ ಮಹಾರಾಷ್ಟ್ರದಲ್ಲಿ ಶಿವಾಜಿ, ಪೇಶ್ವಗಳ ವಂಶಸ್ಥರು ದುರ್ಗೆಯನ್ನು ವಿಶೇಷವಾಗಿ ಆರಾಧಿಸುತ್ತಾರೆ.
ಗುಜರಾತಿನಲ್ಲಿ ರಾಮ- ದುರ್ಗೆಯ ಆರಾಧನೆ ಮಾಡಿ ದಾಂಡಿಯಾ ರಾಸ್ ನೃತ್ಯಗಳು, ಗರ್ಭಾ ಗೀತೆಗಳನ್ನು ಕಟ್ಟಿ ಹಾಡುವರು. ರಾವಣನ ಶವಯಾತ್ರೆ ಮಾಡುವರು.
ಗೋವಾದಲ್ಲಿ ದಸರಾವನ್ನು ದಸ್ರೋ ಎಂದು ದುರ್ಗೆಯ ಆರಾಧನೆ ಮಾಡುವರು. ಪಶ್ಚಿಮ ಬಂಗಾಲದಲ್ಲಿ ಬಿಜೋಯ ದಶಮಿ ಎನ್ನುವ ದಸರಾ ಉತ್ಸವದಲ್ಲಿ ಮಹಿಳೆಯರು ಕೆಂಪುಬಟ್ಟೆಧರಿಸಿ ದುರ್ಗೆ ಮತ್ತು ಅವಳ ನಾಲ್ಕು ಮಕ್ಕಳ ಮಣ್ಣಿನ ಪ್ರತಿಮೆ ಮಾಡಿ ವಿಜೃಂಭಣೆಯಿಂದ ಆರಾಧಿಸಿ ಮೆರವಣಿಗೆ ಮೂಲಕ ಸಾಗಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ.
ತಮಿಳುನಾಡಿನಲ್ಲಿ ಆದಿಪರಾಶಕ್ತಿಯ ಮಹೋತ್ಸವಗಳು ಜರುಗುವವು.
ನೇಪಾಳದಲ್ಲಿ ದಶೈನ್ ಎಂಬ ಹೆಸರು ಪಡೆದಿರುವ ದಶಮಿ ಹಬ್ಬವು ಯುವಕರು ಹಿರಿಯರನ್ನು ಭೇಟಿ ಮಾಡುವ ವಿದ್ಯಾರ್ಥಿಗಳು ತಮ್ಮ ಶಿಕ್ಷರನ್ನು ಭೇಟಿ ಮಾಡಿ ಫಲದಕ್ಷಿಣೆಗಳನ್ನು ಅರ್ಪಿಸುವ ಹಬ್ಬವಾಗಿದೆ.
ಇಲ್ಲಿ ಕೆಂಪು ಟೀಕಾ(ಕುಂಕುಮ)ವನ್ನು ಸ್ತ್ರೀಯರಿಗೆ ಹಚ್ಚಿ ಆಶೀರ್ವಾದವನ್ನು ಪಡೆಯುವುದುಂಟು. ಹೀಗೆ ದೇವಿಯನ್ನು ವಿವಿಧ ರೂಪಗಳಲ್ಲಿ ಆರಾಧಿಸುವ ಸಂಪ್ರದಾಯ ರೂಢಿ ಭಾರತದಲ್ಲಿ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ.
ಈ ಹಿಂದೆ ಹೇಳಿದಂತೆ *ಉಪಾಸಿಕಾನಾ ಕಾರ್ಯಾರ್ಥೇ ಬ್ರಹ್ಮಣೋ ರೂಪಕಲ್ಪ್ಯತೇ* ಎಂಬಂತೆ ತನ್ನನ್ನು ಆರೋಧಿಸುವವರನ್ನು ರಕ್ಷಿಸುವುದಕ್ಕಾಗಿ ಅವರ ಪ್ರಯೋಜನಕ್ಕಾಗಿ ಪರಬ್ರಹ್ಮವು ಅನೇಕ ರೂಪ ತಾಳುತ್ತದೆ.
ಹೀಗಾಗಿ ಪರಬ್ರಹ್ಮಸ್ವರೂಪಿಯಾದ ಶ್ರೀಮಾತೆಯು ಭಕ್ತರು, ಆರಾಧಕರು, ಸಾಧಕರು ಯಾವ ಯಾವ ರೀತಿ ಪೂಜಿಸುವರೇ ಆಯಾ ರೀತಿಯಲ್ಲೇ ಸೇವೆಯನ್ನು ಸ್ವೀಕರಿಸಿ ಅನುಗ್ರಹಿಸುತ್ತಿರುವಳು.
*ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಛೆ* ಎಂಬ ದುರ್ಗೆಯ ನವಾರ್ಣ ಮಂತ್ರವನ್ನು 108 ಬಾರಿ ಭಕ್ತಿಯಿಂದ ಜಪಿಸಿ ದೇವಿಯನ್ನು ವಿವಿಧ ಪುಷ್ಪ-ಪತ್ರೆಗಳಿಂದ ಆರ್ಚಿಸಬೇಕು.
ವಿಶೇಷವಾಗಿ ಬೆಲ್ಲ, ತುಪ್ಪ, ಎಳ್ಳನ್ನು ಸೇರಿಸಿ ಮಾಡಿದ ಕಜ್ಜಾಯ, ಕರಿದ ತಿಂಡಿಗಳು, ಸಿಹಿ ತಿನಿಸು, ಫಲಗಳನ್ನು ದೇವಿಗೆ ಅರ್ಪಿಸಿ ಯಥಾಶಕ್ತಿ ೩,೫,೯ ಜನ ಸುಮಂಗಲಿಯರಿಗೆ ಅರಿಶಿನ-ಕುಂಕುಮ ವಸ್ತ್ರ, ಫಲದಕ್ಷಿಣೆಗಳನ್ನು ನೀಡಿ ಸಂತೋಷ ಪಡಿಸಬೇಕು.
🪷 *ನಮಸ್ಕಾರ* 🪷
*🪷ಶ್ರೀ ಜಗದಂಬಾರರ್ಪಣಮಸ್ತು🪷*
03/10/2024
👉 Only ₹199/-! Limited offer, act now! 🎁 Special Offer: FREE "50-page Coloring Book" + "10 Krishna Wall Art" included!
02/10/2024
*ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ, ಸಜ್ಜನ ಮಹಾಪುರುಷನ ಸ್ಮರಣೆ...!!!*
🪷🪷🪷🪷🪷
*"ಎಲ್ಲರಿಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು."*
*ಅಕ್ಟೋಬರ್ ಎರಡು ರಂದು ಶಾಸ್ತ್ರೀಜಿಯವರ ಜನ್ಮದಿನ. ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ, ಸಜ್ಜನ ಮಹಾಪುರುಷನನ್ನು ನಾವಿಂದು ಸ್ಮರಿಸಬೇಕಿದೆ..*
*ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮೀರಿಸಿದ್ದರು. ಅದು ಕೆಲವರ ಕಣ್ಣು ಕೆಂಪಾಗಿಸಿತ್ತು. ಕಾಂಗ್ರೆಸ್ಸಿಗರ ಹೊಟ್ಟೆಯಲ್ಲೇ ಕಿಚ್ಚು ಹೊತ್ತಿಕೊಂಡಿತ್ತು.*
*"ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ!"*
*ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಜತೆಗೆ ದುರ್ಬಲ ಕಾಯದ ಈ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ. ಇದಾಗಿ ಎರಡು ವಾರಗಳಾಗಿವೆಯಷ್ಟೆ.*
*ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ ಬಂದಿದ್ದರು. ಇನ್ನೇನು ಊಟಕ್ಕೆ ಕುಳಿತು ಕೊಳ್ಳಬೇಕು. ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ ಮರೆತ ಶಾಸ್ತ್ರಿಯವರು '10 ಜನಪಥ್' ರಸ್ತೆಯಲ್ಲಿದ್ದ ಪ್ರಧಾನಿ ಕಚೇರಿಯತ್ತ ನಡೆದೇ ಬಿಟ್ಟರು.*
*ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ಮುಖ್ಯಸ್ಥರು ಪ್ರಧಾನಿಯ ಹಾದಿಯನ್ನೇ ಎದುರು ನೋಡುತ್ತಿದ್ದರು.* *ಶಾಸ್ತ್ರಿಯವರು ಬಂದಿದ್ದೇ ತಡ ವೈಸ್ ಅಡ್ಮಿರಲ್ ಭಾಸ್ಕರ ಸದಾಶಿವ ಸೋಮನ್ ಮತ್ತು ಏರ್‌ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಪ್ರಧಾನಿ ಕೊಠಡಿಯನ್ನು ಸೇರಿದರು. ಏನಿರಬಹುದು? ಎಂದು ಉಳಿದವರು ಯೋಚಿಸುವ ಮೊದಲೇ ಎಲ್ಲರೂ ಹೊರಬಂದರು.*
*ಕೇವಲ 5 ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಯವರು ಎದೆ ಝಲ್ಲೆನಿಸುವಂತಹ ನಿರ್ಧಾರ ಕೈಗೊಂಡಿದ್ದರು.ಪಾಕ್‌ನ ಮೇಲೆ ಯುದ್ಧ ಘೋಷಣೆಯಾಗಿತ್ತು. ಜಮ್ಮುವಿನ ಛಾಂಬ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದ ಪಾಕಿಸ್ತಾನಿ ಪಡೆಗಳು ಸುಮಾರು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು.*
*ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಛಾಂಬ್ ಅನ್ನು ರಕ್ಷಿಸಿ ಕೊಳ್ಳುವುದು ಅಸಾಧ್ಯ ಎಂದು ಅರ್ಜನ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಶಾಸ್ತ್ರೀಜಿ ಅಳುಕಲಿಲ್ಲ. ನೆಹರು ಅವರಂತೆ ಗೋಗರೆಯುತ್ತ ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ. ಅಂತಾರಾಷ್ಟ್ರೀಯ ಒತ್ತಡದ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಕೆಂದರೆ 'ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ' ಎಂದು ಹದಿನೈದು ದಿನಗಳ ಹಿಂದಷ್ಟೇ ತಾವೇ ಹೇಳಿದ ಮಾತುಗಳನ್ನು ಅವರು ಮರೆತಿರಲಿಲ್ಲ. 'ಛಾಂಬ್ ಕೈ ಜಾರುವ ಮೊದಲು, ಲಾಹೋರನ್ನು ವಶಪಡಿಸಿಕೊಳ್ಳಿ' ಎಂದು ಭಾರತೀಯ ಪಡೆಗಳಿಗೆ ನಿರ್ದೇಶನ ನೀಡಿಯೇ ಬಿಟ್ಟರು. ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿ ದೊಡ್ಡ ಸಂಘರ್ಷ ಅದಾಗಿತ್ತು. ಏಕೆಂದರೆ ಎರಡೂ ರಾಷ್ಟ್ರಗಳು ಸಾವಿರಕ್ಕೂ ಅಧಿಕ ಟ್ಯಾಂಕ್‌ಗಳೊಂದಿಗೆ ಪರಸ್ಪರ ಮುಗಿಬಿದ್ದಿದ್ದವು. ಆರಂಭದಲ್ಲಿ ಪಾಕಿಸ್ತಾನದ್ದೇ ಮೇಲುಗೈ. ಅಮೆರಿಕ ದಾನ ಮಾಡಿದ್ದ ಸುಧಾರಿತ ಎಂ-48 ಪ್ಯಾಟನ್ ಟ್ಯಾಂಕ್‌ಗಳನ್ನು ಹೊಂದಿದ್ದ ಪಾಕಿಸ್ತಾನದ ಎರಡು ಸೇನಾ ತುಕಡಿಗಳು ಭಾರತದ ಮೇಲೆ ಆಕ್ರಮಣ ಮಾಡಿದರೆ, ನಮ್ಮ ಒಂದೇ ತುಕಡಿ ಶತ್ರುವನ್ನು ಹಿಮ್ಮೆಟ್ಟಿಸಬೇಕಿತ್ತು. ಜತೆಗೆ ಪ್ರತಿ ದಾಳಿಯನ್ನು ಮಾಡಬೇಕಿತ್ತು. ಆದರೇನಂತೆ ಸಪ್ಟೆಂಬರ್ 10ರಂದು 'ಅಸಲ್ ಉತ್ತರ್' (True North) ಬಳಿ ನಡೆದ ನಿರ್ಣಾಯಕ ಸಮರದಲ್ಲಿ ನಮ್ಮ ಸೈನಿಕರು ಪಾಕ್‌ನ 97 ಟ್ಯಾಂಕ್‌ಗಳನ್ನು ವಶಪಡಿಸಿಕೊಂಡರು.* *ಲಾಹೋರನ್ನು ರಣರಂಗವಾಗಿಸಿದರು. ಶಾಸ್ತ್ರೀಜಿ ಅವರ ತಾಕತ್ತಿನ ಬಗ್ಗೆ ಕೀಳಂದಾಜು ಮಾಡಿದ್ದ ಜನರಲ್ ಅಯೂಬ್‌ಖಾನ್ ಬೆದರಿದ. ಏಕೆಂದರೆ ಚೀನಾ ಕೈಯಲ್ಲಿ ಸೋತಿದ್ದ ನಮ್ಮನ್ನು ಬಗ್ಗುಬಡಿಯಲು ಇದೇ ಸರಿಯಾದ ಸಮಯವೆಂದು ಭಾವಿಸಿದ್ದ ಅಯೂಬ್‌ಖಾನ್‌ಗೆ ಶಾಸ್ತ್ರೀಜಿ ತಕ್ಕ ಪ್ರತ್ಯುತ್ತರ ನೀಡಿದ್ದರು.*
*ಈ ಮಧ್ಯೆ ಪಾಕಿಸ್ತಾನದ ಪರ ನಿಲುವು ತಳೆದಿದ್ದ ಚೀನಾ, ಯುದ್ಧದಲ್ಲಿ ಮೂಗು ತೂರಿಸುವ ಮಾತಾಡಿತು. ಆದರೂ ಬೆದರಿಕೆಗೆ ಬಗ್ಗಲಿಲ್ಲ ಭಾರತ. ಯುದ್ಧ ಮುಂದುವರೆಯಿತು. ಏಕೆಂದರೆ ಅಂದು ಪ್ರಧಾನಿಯಾಗಿದ್ದದ್ದು ನೆಹರು ಅಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ. ಹಾಗಾಗಿಯೇ 'ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡಿ' ಎಂಬ ಕರೆಗೆ 50 ಕೋಟಿ ಭಾರತೀಯರು ಮನಃಪೂರ್ವಕವಾಗಿ ಓಗೊಟ್ಟಿದ್ದರು.ಇತ್ತ ಪರಿಸ್ಥಿತಿ ತೀವ್ರ ಸ್ಥಿತಿಗೆ ತಲುಪಿತು. ಕೈ ಮೀರಿ ಹೋಗುವ ಲಕ್ಷಣ ಕಂಡುಬಂತು. ಮುಂದಾಗ ಬಹುದಾದ ಅಪಾಯವನ್ನರಿತ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಫಲವಾಗಿ, ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು. ಅವುಗಳಲ್ಲಿ 152 ಟ್ಯಾಂಕ್‌ಗಳನ್ನು ನಮ್ಮ ಸೈನಿಕರು ನಾಶಪಡಿಸುವ ಬದಲು ವಶಪಡಿಸಿ ಕೊಂಡಿದ್ದರು.ಅದು ನಮ್ಮ ಬಹಾದ್ದೂರಿಕೆಯ ಪ್ರತೀಕವಾಗಿತ್ತು. ಆದರೆ ಪ್ರತಿಯಾಗಿ ಭಾರತ ಕಳೆದುಕೊಂಡಿದ್ದು ಕೇವಲ 128 ಟ್ಯಾಂಕುಗಳು.*
*ಇತ್ತ ಶಾಸ್ತ್ರಿಯವರ ಬಗ್ಗೆ ಹಗುರವಾಗಿ ಮಾತಾಡಿದ್ದವರು ಯುದ್ಧ ಮುಗಿದ ಮೇಲೆ ಸೊಲ್ಲೇ ಎತ್ತಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ, 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ ನೆಹರು ಬದಲು ಶಾಸ್ತ್ರೀಜಿ ಪ್ರಧಾನಿಯಾಗಿರಬೇಕಿತ್ತು ಎಂಬ ಭಾವನೆ ಜನಮನದಲ್ಲುಂಟಾಯಿತು.*ಸೋವಿಯತ್ ರಷ್ಯಾ. ಅಮೇರಿಕ ಮತ್ತು ಚೀನಾಗಳು ಹುಬ್ಬೇರಿಸಿದವು. ರಣರಂಗದಲ್ಲಿ ಶಾಸ್ತ್ರಿಯವರನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತವು. ಮಾತುಕತೆಗೆ ಕರೆದವು. ಈಗಿನ ಕಜಕಿಸ್ತಾನದ ತಾಷ್ಕೆಂಟ್‌ನಲ್ಲಿ ಸಂಧಾನ ಮಾತುಕತೆ ಏರ್ಪಾಡಾಯಿತು. ಮುಂದಿನದ್ದು ಮಹಾನ್ ದುರಂತ.*
*ರಷ್ಯಾ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ 1966, ಜನವರಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಅಯೂಬ್‌ಖಾನ್ ನಡುವೆ ಸಂಧಾನ ಪ್ರಾರಂಭವಾಯಿತು. 'ಮುಂದೆಂದೂ ಬಲಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವುದಿಲ್ಲ' ಎಂದು ಲಿಖಿತ ಭರವಸೆ ನೀಡಬೇಕೆಂದು ಶಾಸ್ತ್ರೀಜಿ ಪಟ್ಟು ಹಿಡಿದರು.*
*ಅಯೂಬ್‌ಖಾನ್ ಒಪ್ಪದೇ ಹೋದಾಗ,''Then you will have to find another PM'' (ಹಾಗಾದರೆ ನನ್ನ ನಂತರದ ಪ್ರಧಾನಿ ಬರುವವರೆಗೂ ಕಾಯ ಬೇಕಾಗುತ್ತದೆ) ಎಂದು ಮುಖಕ್ಕೆ ಹೊಡೆದಂತೆ ಹೇಳಿದರು.. ಶಾಸ್ತ್ರಿಯವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅರಿತ ಅಯೂಬ್ ಖಾನ್ ತಾನೇ ಮಣಿದ. ಲಿಖಿತ ಭರವಸೆ ನೀಡಿದ. ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿತ್ತು. ಆದರೆ ಸಹಿಯ ಶಾಯಿ ಆರುವ ಮೊದಲೇ, ಮಧ್ಯರಾತ್ರಿ 1 ಗಂಟೆ 32 ನಿಮಿಷಕ್ಕೆ ಭಾರತಕ್ಕೆ ಬರಸಿಡಿಲು ಬಂದೆರಗಿತು. ಶಾಸ್ತ್ರೀಜಿ ಅನುಮಾನಾಸ್ಪದವಾಗಿ, 'ಹೃದಯಾಘಾತ'ಕ್ಕೊಳಗಾಗಿದ್ದರು. ಗಾಂಧೀಜಿ ಕೊಲೆಯಾದ ನಂತರ ಮೊದಲಬಾರಿಗೆ ಇಡೀ ದೇಶವೇ ಕಂಬನಿಯ ಕೋಡಿಯಲ್ಲಿ ತೇಲಿ ಹೋಯಿತು. ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮೀರಿಸಿದ್ದರು.ಅದು ಕೆಲವರ ಕಣ್ಣು ಕೆಂಪಾಗಿಸಿತ್ತು. ಕಾಂಗ್ರೆಸ್ಸಿಗರ ಹೊಟ್ಟೆಯಲ್ಲೇ ಕಿಚ್ಚು ಹೊತ್ತಿಕೊಂಡಿತ್ತು. ಹಾಗಾಗಿ ಶಾಸ್ತ್ರಿಯವರ ದುರಂತಮಯ ಅಧ್ಯಾಯ ಸಾವಿನ ನಂತರವೂ ಮುಂದುವರಿಯಿತು. ನೀಲಿಗಟ್ಟಿದ್ದ ದೇಹ ಭಾರತಕ್ಕೆ ಬಂತು! ಆದರೆ ಶವ ಪರೀಕ್ಷೆ ನಡೆಯಲಿಲ್ಲ*
*ಕೆಲವು ಕೃತಘ್ನ ಭಾರತೀಯರೇ ಶಾಸ್ತ್ರಿಯವರನ್ನು ಇತಿಹಾಸದ ಕಸದ ತೊಟ್ಟಿಗೆ ದೂಡಿ ಕೈ ತೊಳೆದುಕೊಳ್ಳಲು ವ್ಯವಸ್ಥಿತ ಪಿತೂರಿ ನಡೆಸಿದ್ದರು. ಗಾಂಧೀಜಿ ಮತ್ತು ನೆಹರು ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಶಾಸ್ತ್ರಿಯವರ ಅಂತ್ಯ ಸಂಸ್ಕಾರ ನಡೆಸಲು ಅಡ್ಡಗಾಲು ಹಾಕಿ, ದೇಹವನ್ನು ಅಲಹಾಬಾದ್‌ಗೆ ಕೊಂಡೊಯ್ಯಲು ಹವಣಿಸಿದರು. ಮೊದಲೇ ನೊಂದಿದ್ದ ಪತ್ನಿ ಲಲಿತಾಶಾಸ್ತ್ರಿ ದೇಶದ ಜನರ ಮುಂದೆ ಬಣ್ಣ ಬಯಲು ಮಾಡುವ ಬೆದರಿಕೆ ಹಾಕಿದಾಗ ದಿಲ್ಲಿಯಲ್ಲೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡಲಾಯಿತು. ಅಷ್ಟೇ ಅಲ್ಲ, ಶಾಸ್ತ್ರೀಜಿಯವರ ಸಮಾಧಿ ಮೇಲೆ ಅವರದ್ದೇ ಆದ 'ಜೈ ಜವಾನ್, ಜೈ ಕಿಸಾನ್' ಘೋಷಣೆಯನ್ನು ಕೆತ್ತುವುದಕ್ಕೂ ಅಡ್ಡಿಪಡಿಸಿದರು. ಮತ್ತೆ ಲಲಿತಾ ಶಾಸ್ತ್ರಿ ಉಪವಾಸ ಸತ್ಯಾಗ್ರಹ ಮಾಡುವೆನೆಂದು ಬೆದರಿಕೆ ಯೊಡ್ಡಬೇಕಾಗಿ ಬಂತು. ದುಃಖದಿಂದ ಹೊರಬರುವ ಮೊದಲೇ ಶಾಸ್ತ್ರೀಜಿ ಭಾವಚಿತ್ರ ಖಾನ್ ಗ್ರೇಸ್ ಕಾರ್ಯಾಲಯದಿಂದಲೂ ಕಣ್ಮರೆಯಾಯಿತು. ಇಂದಿರಾ ಪ್ರೇರಿತ ಕಾಂಗ್ರೆಸ್ಸಿಗರ ಪಿತೂರಿ ಆ ಮಟ್ಟಿಗಿತ್ತು.*
*1904, ಅಕ್ಟೋಬರ್ 2ರಂದು ಕಾಶಿ ಸಮೀಪದ ಮೊಘಲ್ ಸರಾಯ್‌ನಲ್ಲಿ ಬಡ ಶಿಕ್ಷಕರ ಮಗನಾಗಿ ಹುಟ್ಟಿದ ಲಾಲ್ ಬಹಾದ್ದೂರ್ ಶಾಸ್ತ್ರಿಯವರದ್ದು ಏಳುಬೀಳಿನ ಹಾದಿ. ಪ್ರಧಾನಿ ಸ್ಥಾನ ಪಿತ್ರಾರ್ಜಿತ ಆಸ್ತಿಯಂತೆ ಬಂದಿದ್ದಲ್ಲ. ಬಾಲ ಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದ ಅವರು 1921ರಲ್ಲಿ ಶಿಕ್ಷಣಕ್ಕೆ ಶರಣು ಹೊಡೆದು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ಆರು ವರ್ಷ ಜೈಲುವಾಸವನ್ನೂ ಅನುಭವಿಸಿದ್ದರು. ಆದರೆ ಸ್ವಾತಂತ್ರ್ಯಾನಂತರ ಕೇಂದ್ರ ಸಚಿವರಾದ ಶಾಸ್ತ್ರಿಯವರ ಏಳಿಗೆಯನ್ನು ನೆಹರು ಸಹಿಸದಾದರು. ಅವರ ಅಸಹನೆ ಯಾವ ಮಟ್ಟಕ್ಕೆ ತಲುಪಿತೆಂದರೆ ಎಲ್ಲ ಖಾತೆಗಳನ್ನು ಕಿತ್ತುಕೊಂಡು 'ಖಾತೆ ರಹಿತ' ಮಂತ್ರಿಯಾಗಿಸಿ ಅವಮಾನವನ್ನೂ ಮಾಡಿದರು. ಎಲ್ಲಿ ಶಾಸ್ತ್ರಿಯವರು ಅಡ್ಡಗಾಲಾಗುತ್ತಾರೋ ಎಂಬ ಭಯದಿಂದ 'ನೆಹರು ನಂತರ ಯಾರು?' ಎಂಬ ಪ್ರಶ್ನೆಯನ್ನು ಸ್ವತಃ ಹುಟ್ಟು ಹಾಕಿ ತನ್ನ ಮಗಳು ಇಂದಿರಾ ಗಾಂಧಿಯವರನ್ನು ಉತ್ತರಾಧಿಕಾರಿಯಾಗಿ ಮಾಡಲು ಹವಣಿಸಿದರು. ಶಾಸ್ತ್ರಿಯವರ ನಿಗೂಢ ಮರಣದೊಂದಿಗೆ ನೆಹರು ಆಸೆ ಈಡೇರಿತು.*
*ಇಂದಿರಾ ಪ್ರಧಾನಿಯಾದರು. ಭಾರತ ಮತ್ತೆ ನೆಹರು ಕುಟುಂಬಕ್ಕೆ ನೇಣು ಹಾಕಿಕೊಂಡಿತು. ಶಾಸ್ತ್ರೀಜಿ ಪಠ್ಯ ಪುಸ್ತಕಗಳ ಒಂದೆರಡು ಪ್ಯಾರಾಗಳಿಗೆ ಸೀಮಿತರಾದರು. ಇತಿಹಾಸ ತನ್ನ ಧೀರ ಪುತ್ರನನ್ನೇ ಮರೆಯುವಂತಾಯಿತು. ಏಕೆ ಈ ಮಾತು ಹೇಳ ಬೇಕಾಗಿದೆ ಗೊತ್ತಾ? ಅಕ್ಟೋಬರ್ 2ರಂದೇ ಜನಿಸಿದ ಈ ದೇಶದ ಮತ್ತೊಬ್ಬ ಸುಪುತ್ರ ಹಾಗೂ ಜನಪ್ರಿಯ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ನಾವೂ ಮರೆಯುವುದು ಬೇಡ.*
*ಒಂದೇ ಭಾರತ ಶ್ರೇಷ್ಠ ಭಾರತ ಜೈ ಹಿಂದ್,ಹೀಗೆ ಬದುಕಿದ್ದರು ನಮ್ಮ ಶಾಸ್ತ್ರೀಜಿ.*
*ಎರಡು ಘಂಟೆ ಯುದ್ಧ ಮುಂದುವರಿದಿದ್ದರೆ, ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು.*
*ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು. ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.*
*ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು. ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ, ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು. ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ.ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ, ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು. ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”*
*ಹೊಟ್ಟೆಗೆ ಆಹಾರ ಇಲ್ಲದಿದ್ದರೆ ಭಾರತೀಯರು ಸಾಯುತ್ತಾರೆ ”ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ. “ದೊಡ್ಡು ಕೊಟ್ಟು ನಿಮ್ಮ ಕಳಪೆ ಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿ ಕೊಳ್ಳುವುದಕ್ಕಿಂತ, ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆ.*
*ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಶಾಸ್ತ್ರೀಜಿ ಮಾತನಾಡುತ್ತಾರೆ.*
*“ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ. ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ.ದೇಶದ ಜನ ಸಹಕರಿಸಬೇಕಿದೆ. ಒಂದು..ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು. ಎರಡು..ಪ್ರತಿ ಸೋಮವಾರ ನೀವು ಉಪವಾಸವೃತವನ್ನು ಆಚರಿಸಬಹುದು. ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು. ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”*
*ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು. ಹಲವರು ಸೇನೆಗೆ ಸಹಾಯ ಮಾಡಿದರು. ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು. ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸವೃತವನ್ನು ಕೈಗೊಂಡರು.*
*ಶಾಸ್ತ್ರೀಜಿಯವರ ಪತ್ನಿ ಲಲಿತಾದೇವಿಯವರು ಅನಾರೋಗ್ಯಪೀಡಿತರಾಗಿದ್ದರು.ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು. ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು. ಆಕೆ "ಅಲ್ಲ, ನಿಮ್ಮ ಬಟ್ಟೆಯನ್ನು ತೊಳೆಯುವುದು, ಮನೆಯನ್ನು ಸ್ವಚ್ಛಗೊಳಿಸುವುದು, ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ”ಎಂದು ಕೇಳಿದಳು.*
*“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ. ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು. ದೇಶದ ಒಳಿತಿಗಾದೀತು” ಎಂದು ಹೇಳಿದರು. ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.*
*ಶಾಸ್ತ್ರೀಜಿಯವರ ಮಕ್ಕಳಿಗೆ ಇಂಗ್ಲೀಷ್ ಹೇಳಿ ಕೊಡಲೆಂದು ಟ್ಯೂಟರ್ ಬರುತ್ತಿದ್ದರು. ಅವರನ್ನೂ ಕೆಲಸದಿಂದ ವಿಮುಕ್ತಗೊಳಿಸಿದರು. "ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ” ಟ್ಯೂಟರ್ ಹೇಳಿದ್ದಕ್ಕೆ ಶಾಸ್ತ್ರೀಜಿ,”ಆಗಲಿ ಬಿಡಿ ಇಂಗ್ಲೀಷ್ ನಮ್ಮ ಭಾಷೆಯಲ್ಲ. ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ”ಎಂದರು.*
*ಒಂದು ದಿನ ಶಾಸ್ತ್ರೀಜಿಯವರ ಪತ್ನಿ, ಹರಿದು ಹೋಗಿರುವ ಅವರ ಧೋತಿಯನ್ನು ನೋಡಿ “ಒಂದು ಹೊಸ ಧೋತಿಯನ್ನಾದರೂ ತೆಗೆದು ಕೊಳ್ಳಬಾರದೇ?”ಎಂದು ಕೇಳುತ್ತಾರೆ.”ಅದನ್ನು ಕೊಳ್ಳಲು ಹಣವೆಲ್ಲಿದೆ..? ಬರುವ ಸಂಬಳವನ್ನೂ ಬಿಟ್ಟಾಗಿದೆ.ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು. ಅಕ್ಟೋಬರ್ ಎರಡುರಂದು ಶಾಸ್ತ್ರೀಜಿಯವರ ಜನ್ಮದಿನ. ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ, ಸಜ್ಜನ ಮಹಾಪುರುಷನನ್ನು ನಾವಿಂದು ಸ್ಮರಿಸಬೇಕಿದೆ.
📖 *ನಮೋ ರಾಷ್ಟ್ರಭಕ್ತರು*🚩
🔥🚩 *ರಾಷ್ಟ್ರ ದೇವಗೆ ಪ್ರಾಣ ದೀವಿಗೆ ಸೇವೆಯಾಗಲಿ ನಾಡಿಗೆ...*🔥🦚
🔥🚩 *ಹಿಂದಿನಂತೆಯೇ ಹಿಂದೂ ಚೇತನ.. ಹಿಂದೂ ಜಾಗೃತವಾಗಿದೆ...*🔥🦚
Namaste is Global now.
12/09/2024
ಇಂದು ಅಮೇರಿಕಾದ ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆಯಲ್ಲಿ ಭಾರತದ ಶಕ್ತಿ ಪ್ರದರ್ಶನಗೊಂಡ ದಿನ. ಹಿಂದೂ ಧರ್ಮ ಹಾಗೂ ಭಾರತದ ಅದ್ಭುತ ಪರಿಚಯವನ್ನು ನಮ್ಮ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿದ ಅವಿಸ್ಮರಣೀಯ ದಿನ.
ಈ ದಿನವನ್ನು ದಿಗ್ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.