NSUI Bengaluru South District
World’s Largest Youth Organisation
08/12/2023
ದೇಶಕ್ಕಾಗಿ ಕಾಶ್ಮೀರದಲ್ಲಿ ಹುತಾತ್ಮರಾದ ಸೈನಿಕರನ್ನು NSUI ನ ಆನೇಕಲ್ ಟೌನ್ ವತಿಯಿಂದ ಸ್ಮರಿಸಲಾಯಿತು
ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರವೆಂಬ ಘೋಷ ಕೇಳಲು ಅದೆಷ್ಟು ಹುಮ್ಮಸ್ಸು ತರುವುದು ನಮಗೆ ಆದರೆ ನಿತ್ಯ ಅದೆಷ್ಟೋ ಸೈನಿಕರನ್ನು ಬಲಿ ಪಡೆಯುತ್ತಿದೆ. ಇತ್ತೀಚೆಗೆ ಭಯೋತ್ಪಾದಕರ ಧಾಳೀಯಲ್ಲಿ ಕನ್ನಡಿಗ ಜಿಗಣಿಯ ನಿವಾಸಿ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ನಾಲ್ಕು ಮಂದಿ ತಮ್ಮ ಅಮೂಲ್ಯವಾದ ಜೀವನವನ್ನು ತ್ಯಾಗಮಾಡಿ ತಮ್ಮ ಕುಟುಂಬವನ್ನು ಕತ್ತಲೆಗೆ ದೂಡಿದ್ದಾರೆ ಈ ದೇಶದ ಗಡಿ ರಕ್ಷಣೆಗಾಗಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಯುವ ತರುಣರ ಜೀವತ್ಯಾಗವನ್ನು ಸ್ಮರಿಸಲಾಯಿತು
08/12/2023
ಭಾರತದ ಸಂವಿಧಾನ ಶಿಲ್ಪಿ , ನೊಂದವರ ಧ್ವನಿ, ಶಿಕ್ಷಣ ತಜ್ಞ,ಕಾರ್ಮಿಕ ಮತ್ತು ಮಹಿಳಾ ಧ್ವನಿ ಡಾ||ಬಿ.ಆರ್.ಅಂಬೇಡ್ಕರ್ ರವರು ನಮ್ಮನ್ನು ಅಗಲಿ ಹುತಾತ್ಮರಾದ ದಿನದಂದು NSUI ನ ಆನೇಕಲ್ ಟೌನ್ ತಂಡದ ವತಿಯಿಂದ ಚೇತನರನ್ನು ಶ್ರದ್ದಾ ಮತ್ತು ಗೌರವದಿಂದ ಸ್ಮರಿಸಲಾಯಿತು ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮುನ್ನಾವರವರು ಹಾಗೂ ಮುಖಂಡರಾದ ಗಣೇಶ್ ಹಾಗೂ NSUI ನ ಆನೇಕಲ್ ಟೌನ್ ಅಧ್ಯಕ್ಷರಾದ ಚಿರಂಜೀವಿ ಆರಾಧ್ಯ ಹಾಗೂ ಶಬೀರ್, ಅಕ್ಷಯ್, ನಿತಿನ್, ರೆಹನ್, ಫಹಾದ್, ಗುರು ಹಾಗೂ ಎಲ್ಲ ಪದಾಧಿಕಾರಿಗಳು ಸೇರಿದ್ದರು
19/04/2023
ಈ ದಿನ ಆನೇಕಲ್ ನ NSUI ನ ವತಿಯಿಂದ ಆನೇಕಲ್ ತಾಲೂಕು ಶಾಸಕರಾದ ಬಿ ಶಿವಣ್ಣನವರ ನಾಮಪತ್ರ ಸಂದರ್ಭದಲ್ಲಿ ಎಲ್ಲಾ ಕಾರ್ಯಕರ್ತರ ಜೊತೆಗೆ NSUI ನ ಬಾವುಟಗಳನ್ನು ಹಿಡಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ನಮ್ಮೊಂದಿಗೆ ರೋಹಿತ್ ರೆಡ್ಡಿ ವಿನಿತ್,ಪವನ್ ಚಿರಂಜೀವಿ ,ಹರ್ಷಿತ್,
ನಿಖಿಲ್ ,ಆದರೂ ಪವನ್ ,ಜೀವನ್ ರವರು ಹಾಗೂ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.
16/04/2023
ಹೆಬ್ಬಗೋಡಿ ನಗರಸಭಾ ವ್ಯಾಪ್ತಿಯಲ್ಲಿಂದು ಜನಪ್ರಿಯ ಶಾಸಕ *ಬಿ.ಶಿವಣ್ಣ* ರವರು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(NSUI)ದ ಆನೇಕಲ್ ವಿಧಾನಸಭಾ ಅಧ್ಯಕ್ಷರಾದ *ವಿನೀತ್.ಎಂ* ಹಾಗೂ ಹೆಬ್ಬಗೋಡಿ ನಗರಸಭಾ ವ್ಯಾಪ್ತಿಯ ಅಧ್ಯಕ್ಷರಾದ *ನಿಖಿಲ್.ಹೆಚ್.ಆರ್* ರವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(NSUI)ದ ನೂತನ ಪಧಾದಿಕಾರಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಿದರು.
14/04/2023
ಡಾ|| ಬಿ.ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಈ ದಿನ ಆನೇಕಲ್ ನ NSUIನ ಪದಾಧಿಕಾರಿಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು
ಈ ಸಮಯದಲ್ಲಿ ಕಾರ್ಯಕ್ರಮದ *ಮುಖ್ಯ ಭಾಷಣವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಯುತ ಆದೂರು ಪ್ರಕಾಶ್* ರವರು ಮಾತನಾಡಿ ಯುವಕರಿಗೆ ಅಂಬೇಡ್ಕರವರ ಜೀವನ ಚರಿತ್ರೆಯನ್ನು ತಿಳಿಸಿ ಮಾರ್ಗದರ್ಶನ ನೀಡಿದರು
ಈ ಸಮಯದಲ್ಲಿNSUI ನ ಜಿಲ್ಲಾ ಉಪಾಧ್ಯಕ್ಷರಾದ Rohith Reddy ರವರು ತಾಲೂಕು ಅಧ್ಯಕ್ಷರಾದ ವಿನೀತ್ ರವರು
ಹಾಗೂ NSUI ನ ಆನೇಕಲ್ ಟೌನ್ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದರು
04/04/2023
Newly appointed Nsui Ward Presidents of Padmanabhanagara assembly.
13/12/2022
ಗೋವಿಂದರಾಜನಗರ ವಿಧಾನಸಭಾ NSUI ವತಿಯಿಂದ ವಿದ್ಯಾರ್ಥಿಗಳ ಸಮಸ್ಯೆ ಈಡೇರಿಸುವಂತೆ ಸರ್ಕಾರದ ವಿರುದ್ದ 17/12/2022 ರಂದು ಹಮ್ಮಿಕೊಂಡಿರುವ ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜು ಬಂದ್ ಗೆ ಸಹಕರಿಸುವಂತೆ ಗೋವಿಂದರಾಜನಗರದ ಸರ್ವೋದಯ,ಸಿ ವಿ ಗುರುಕುಲ ವಾಸವಿ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಬಂದ್ ಗೆ ಸಹಕರಿಸುವಂತೆ ಕೋರಲಾಯಿತು, ಈ ಸಂದರ್ಭದಲ್ಲಿ NSUI ಬೆಂಗಳೂರು ದಕ್ಷಿಣ ಜಿಲ್ಲೆ ಉಪಾಧ್ಯಕ್ಷ ದೀಪು ವಂದನ್ ಪ್ರಧಾನ ಕಾರ್ಯದರ್ಶಿಗಳಾದ ಭರತ್ , ಗೋವಿಂದರಾಜನಗರ ವಿಧಾನಸಭಾ NSUI ದರ್ಶನ್, ಸಾಗರ್ ಮತ್ತು ಹಲವರು ಉಪಸ್ಥಿತರಿದ್ದರು
12/12/2022
ಆನೇಕಲ್ ವಿಧಾನಸಭಾ NSUI ವತಿಯಿಂದ ವಿದ್ಯಾರ್ಥಿಗಳ ಸಮಸ್ಯೆ ಈಡೇರಿಸುವಂತೆ ಸರ್ಕಾರದ ವಿರುದ್ಧ 17/12/2022 ರಂದು ಹಮ್ಮಿಕೊಂಡಿರುವ ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜು ಬಂದ್ ಗೆ ಸಹಕರಿಸುವಂತೆ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಈ ಬಂಧಗೆ ಸಹಕರಿಸುವಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಿ ನಮಗೆ ಸಹಕರಿಸಿ ಎಂದು ಕೋರಲಾಯಿತು. ಈ ಸಂದರ್ಭದಲ್ಲಿ NSUI ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷರಾದ ರೋಹಿತ್ ರೆಡ್ಡಿ, ಆನೇಕಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದಂತಹ ವಿನಿತ್ ಮತ್ತು NSUI ಕಾರ್ಯಕರ್ತರು ಉಪಸ್ಥಿತರಿದ್ದರು
10/12/2022
22 ಲಕ್ಷ ರೈತರ ಸಾಲ ಮನ್ನಾ, ರಾಜ್ಯದ 28 ಲಕ್ಷ ನಿವಾಸಿಗಳಿಗೆ 10 ಲಕ್ಷದವರೆಗೆ ಆರೋಗ್ಯ ವಿಮೆ ಲಾಭ.
ರಾಜಸ್ಥಾನದ ಜನತೆಯ ಮಾತನ್ನು ಆಲಿಸಿದ ನಂತರ ಪ್ರತಿಯೊಂದು ನಿರ್ಧಾರವೂ ಅವರ ಹಿತಾಸಕ್ತಿಯಲ್ಲಿದೆ!
ನಾವು ಕಾಂಗ್ರೆಸ್ - ನಾವು ನೀಡಿದ ಭರವಸೆಯನ್ನು ನಾವು ಎಲ್ಲಾ ರೀತಿಯಿಂದಲೂ ಉಳಿಸಿಕೊಳ್ಳುತ್ತೇವೆ.
- ರಾಹುಲ್ ಗಾಂಧಿ
09/12/2022
National students union of India is calling for All universitys and affiliated colleges bandh on saturday 17/12/2022. reason for bandh, Delay of examinatation results, scholarship should be released immediatly, Free bus pass for students, govt colleges fees should be decreased.
Join us to fight against this education system
STUDENTS POWER NATIONS POWER
17/12/2022 ಶನಿವಾರದಂದು ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಸಂಯೋಜಿತ ಕಾಲೇಜುಗಳ ಬಂದ್‌ಗೆ ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ಕರೆ ನೀಡಿದೆ. ಬಂದ್ ಕಾರಣ, ಪರೀಕ್ಷಾ ಫಲಿತಾಂಶ ವಿಳಂಬ, ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸರ್ಕಾರಿ ಕಾಲೇಜುಗಳ ಶುಲ್ಕ ಇಳಿಕೆ ಮಾಡಬೇಕು.
ಈ ಶಿಕ್ಷಣ ವ್ಯವಸ್ಥೆಯ ವಿರುದ್ಧ ಹೋರಾಡಲು ನಮ್ಮೊಂದಿಗೆ ಸೇರಿ
ವಿದ್ಯಾರ್ಥಿಗಳ ಶಕ್ತಿ ರಾಷ್ಟ್ರಶಕ್ತಿ
Click here to claim your Sponsored Listing.
Location
Telephone
Website
Address
KPCC, Queen’s Road
Bangalore
560001